ಎಕೋ ಕಾರ್ಡಿಯೊಗ್ರಾಂ 
ರೋಗ ನಿಧಾನ ಕ್ರಮದಲ್ಲಿ ಶ್ರವಣಾತೀತ ಧ್ವನಿಚಿತ್ರಣ ಒಂದು ನಾವಿನ್ಯ ಪೂರ್ಣ ವಿಧಾನ. ಅದರ ಬಳಕೆಯಿಂದ ದೇಹದ ಬೇರೆ ಬೇರೆ ಅಂಗ ಭಾಗಗಳ ರೂಪರೇಷೆಯನ್ನು ಮತ್ತು ದೇಹಕ್ಕೆ ಯಾವ ರೀತಿ ತೊಂದರೆಯನ್ನೂಡ್ಡುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ವಿಕಿರಣ ರಶ್ಮಿಯ ಪ್ರಭಾವವಿಲ್ಲದೆ ದೇಹದ ಒಳಭಾಗದಲ್ಲಿನ ಮೃದು ಊತಕಗಳನ್ನು ಪರೀಕ್ಷಿಸಬಹುದು.

	ತುಂಬ ಹೆಚ್ಚು ಆವೃತ್ತಿಯ ಶಬ್ದತರಂಗಗಳ ಬಳಕೆಯಿಂದ ಸಾಗರದಾಳದಲ್ಲಿನ ವಸ್ತುಗಳನ್ನು ಗುರುತಿಸಲು ಸಾಧ್ಯ. ಅದೇ ವಿಧಾನ ವೈದ್ಯಕೀಯ ರಂಗದಲ್ಲಿ ತುಂಬಾ ಉಪಯುಕ್ತಕರವಾಗಿದೆ. ಶಬ್ದವು ಶಕ್ತಿಯ ಒಂದು ರೂಪವಾಗಿದ್ದು ಅದರ ವಹನಕ್ಕೆ ಒಂದು ಮಾಧ್ಯಮ ಬೇಕು. ಶಬ್ದ ಹೊರಹಾಕುವ ಅಲೆಗಳು ಒಂದು ಸೆಕೆಂಡಿಗೆ ಎಷ್ಟು ಎಂಬುದನ್ನನುಲಕ್ಷಿಸಿ ಶಬ್ದದ ಆವೃತಿಯನ್ನು ನಿರ್ಧರಿಸಲಾಗುತ್ತದೆ. ನಮ್ಮ ಕಿವಿಗಳು 20 ಹಟ್ರ್ಸನಿಂದ (ಹಟ್ರ್ಸ ಎಂದರೆ ಸೆಕೆಂಡಿಗೆ ಒಂದು ಅಲೆ) 20,000 ಹಟ್ರ್ಸವರೆಗಿನ ಆವೃತ್ತಿಗಳನ್ನು ಕೇಳಲು ಸಮರ್ಥ. ಅದು 20,000 ಹಟ್ರ್ಸ ಮಿಕ್ಕಿದರೆ ಅದು ಶ್ರವಣಾತೀತ. ಆವೃತ್ತಿಗಳನ್ನು 2 ಮಿಲಿಯನ್ ನಿಂದ 5 ಮಿಲಿಯನ್ ವರೆಗಿನ ಸಂಖ್ಯೆಯಲ್ಲುಂಟುಮಾಡಿ ಆ ಬಗೆಯ ಶ್ರವಣಾತೀತ ತರಂಗಗಳನ್ನು ರೋಗ ನಿದಾನ ಕ್ರಮದಲ್ಲಿ ಉಪಯೋಗಿಸಲಾಗುತ್ತದೆ. 

	ಈ ಬಗೆಯ ಶ್ರವಣಾತೀತ ತರಂಗಗಳನ್ನು ಉತ್ಪಾದಿಸುವ ಸಾಧನ ಧ್ವನಿಗ್ರಾಹಕ. ಅದು ವಿದ್ಯುತ್ ಶಕ್ತಿಯನ್ನು ಶಬ್ದವಾಗಿ ರೂಪಾಂತರಗೊಳಿಸಬಲ್ಲುದು. ಧ್ವನಿಗ್ರಾಹಕವು ಸ್ಪಟಿಕ ಅಥವಾ ಕುಂಬಶಿರ (ತಿಜೋ ವಿದ್ಯುತ್ ಹರಳು)ವನ್ನು ಹೊಂದಿದೆ. ಅದನ್ನು ನಾವಿ ಅಭ್ಯಸಿಸಬಯಸಿದ ಅಂಗಭಾಗದ ಮೇಲೆ (ಎದೆ ಅಥವಾ ಉದರ) ಇರಿಸಿದಾಗ ಅದು ಶ್ರವಣಾತೀತ ತರಂಗಗಳ ವಾಹಕವಾಗಿ ಮತ್ತು ಗ್ರಾಹಕವಾಗಿ ಕಾರ್ಯ ಮಾಡುತ್ತದೆ. 
ದೇಹದ ಪ್ರತಿಯೊಂದು ಊತಕವೂ ನಿರ್ದಿಷ್ಟ ರೀತಿಯಲ್ಲಿ ಶ್ರವಣಾತೀತ ತರಂಗಗಳ ವಹನ ಮತ್ತು ಹೀರಿಕೆಯ ಸಾಮಥ್ರ್ಯವನ್ನು  ಪಡೆದಿದೆ. ಅವು ಹೊಂದಿರುವ ಈ ಅಂತರ್ಗತ ಲಕ್ಷಣವನ್ನು ಊತಕದ ಶಬ್ದನಿರೋಧಕವೆಂದು ಕರೆಯಲಾಗುತ್ತದೆ. ಶ್ರವಣಾತೀತ ತರಂಗಗಳು ಎಲ್ಲಾಕಡೆ ಒಂದೇ ಬಗೆಯಾದ ಶಬ್ದನಿರೋಧ ಹೊಂದಿದ ಊತಕಗಳ ಮೂಲ ಹಾಯ್ದು ಹೋಗುವಾಗ ಒಂದೇ ನೇರ ರೇಖೆಯಂತೆ ಸಾಗುತ್ತದೆ. ಆದರೆ ಊತಕದಲ್ಲಿ ಶಬ್ದ ನಿರೋಧಕತ್ವ ಬೇರೆ ಬೇರೆ ತೆರನಾಗಿದ್ದರೆ ಅವೆರಡರ ಮಧ್ಯಂತರ ಅದನ್ನು ಶಕ್ತಿಯುತವಾಗಿ ಪ್ರತಿಬಿಂಬಿಸುತ್ತದೆ. ಹೀಗೆ ಪ್ರತಿಬಿಂಬಿತವಾದ ಪ್ರತಿಧ್ವನಿಯು ಒಂದು ಪ್ರತಿಮಾ ರೂಪದಲ್ಲಿ ಗೋಚರಿಸುವುದಿದೆ. ಅದನ್ನು ರೋಗವಿದಾನದಲ್ಲಿ ಬಳಸಲಾಗುತ್ತದೆ.

ಧ್ವನಿಗ್ರಾಹಕದ ಸಾಮೀಪ್ಯ ಹೊಂದುವ ಪ್ರತಿಯೊಂದು ಊತಕವು ಶ್ರವಣಾತೀತ ತರಂಗಗಳನ್ನು ಕೆಲಮಟ್ಟಿಗೆ ಹಿಂದಕ್ಕೆ ಪ್ರತಿಬಿಂಬಿಸುತ್ತದೆ. ಮೇಲ್ತಲದ ಅಂಗಭಾಗಗಳು ಹೊರಚಿಮ್ಮುವ ಪ್ರತಿಧ್ವನಿಗಳು ತೀರ ಒಳಭಾಗದಿಂದ ಬರುವುದಕ್ಕಿಂತ ಮೊದಲು ಬರುತ್ತದೆ. ಅದರಿಂದಾಗಿ ಅವೆರಡು ಪ್ರತಿಧ್ವನಿಗಳ ಮಧ್ಯಕಾಲ ವ್ಯತ್ಯಾಸವಿದೆ. ಕಾಲದ ಗತಿ ಮತ್ತು ಶ್ರವಣಾತೀತ ದ್ವನಿ ಪ್ರತಿಬಿಂಬವನ್ನು ಯಂತ್ರದಲ್ಲಿನ ಕಂಪ್ಯೂಟರ್ ಊಧ್ರ್ವಮುಖ ಗೆರೆಯಂತೆ ಮೇಲಕ್ಕೆ ಮತ್ತು ಕೆಳಗೆ ಕಾಲದ ಅಂತರದ ಜೊತೆ ತೋರಿಸುವುದು. 

ಈ ಉಪಕರಣ ನೀಡುವ ಚಿತ್ರ ಎರಡು ಬಗೆಯದು. ಅದು ಆವರ್ತನಕ್ಕೆ ಇಲ್ಲವೆ ಪ್ರಕಾಶಕ್ಕೆ ಸಂಬಂಧಿಸಿರಬಹುದು. ಪ್ರತಿಧ್ವನಿಯ ಆವರ್ತನದ ಸಂಖ್ಯೆ ಹೆಚ್ಚು ಇದ್ದಷ್ಟೂ ಅದರ ತೀವ್ರತೆ ತುಂಬ ಹೆಚ್ಚು ಹಾಗೂ ಎರಡು ಊತಕಗಳ ಮಧ್ಯೆ ಇರುವ ಪ್ರತಿಧ್ವನಿಯಲ್ಲಿನ ವ್ಯತ್ಯಾಸವೂ ಹೆಚ್ಚು ಮೇಲೆ ಲಭಿಸಿದ ಸಂಗತಿಗಳು ಹೆಚ್ಚು. ಪ್ರಕಾಶಮಾನವಾಗಿ ದಾಖಲೆಯಾಗಿ ಅದರ ಗಾತ್ರವನ್ನು ತೋರಿಸುವ ಎರಡನೇ ವಿಧಾನವು ಹೆಚ್ಚು ಪ್ರಚಲಿತ ಅದರಿಂದ ಊತಕ ಅಥವಾ ಅಂಗದ ಎರಡು ಮುಖ ಆಕೃತಿ ರೂಪುಗೊಳ್ಳುವುದು.

ಶ್ರವಣಾತೀತ ಧ್ವನಿಚಿತ್ರಣ ರೋಗ ನಿದಾನದಲ್ಲಿ ಅನೇಕಬಗೆಯ ಉಪಯುಕ್ತತೆಯನ್ನು ಹೊಂದಿದೆ. ಹೃದಯ ರೋಗಗಳ ಆಮೂಲಾಗ್ರ ಪರಿಶೀಲನೆ ಈ ಉಪಕರಣದಿಂದ ಸಾಧ್ಯವಿದ್ದು ಅದು ನೀಡುವ ಚಿತ್ರವನ್ನು ಪ್ರತಿಧ್ವನಿ ಹೃದಯ ಚಿತ್ರ (ಎಕೋ ಕಾರ್ಡಿಯೋಗ್ರಾಂ) ವೆಂದು ಕರೆಯಲಾಗುತ್ತದೆ. ಅದರಿಂದ ಕವಾಟ ರೋಗಗಳನ್ನು, ಕವಾಟದ ಮೇಲಿನ ಸಸ್ಯದಂತಹ ಬೆಳೆಯನ್ನು ಕುಕ್ಷಿ ಅಥವಾ ಹಜಾರ ಮಧ್ಯದ ತೆರೆಯ ರಂಧ್ರಗಳನ್ನು ಗುರುತಿಸಬಹುದು.
ಹೃದಯ ಬಿತ್ತಿಯ ಅಸಹಜ ಚಲನೆಯನ್ನು ಕೋನದೊಳಗಣ ರಕ್ತ ಹೆಪ್ಪುಗೆಯನ್ನು ಮತ್ತು ಗಂತಿಗಳ ಇರುವಿಕೆಯನ್ನು ತಿಳಿಯಬಹುದು. ಹೃದಯಸುತ್ತೋರೆಯಲ್ಲಿ ದ್ರವಸಂಚಯಗೊಂಡಾಗ ಆ ಪ್ರದೇಶದಲ್ಲಿ ಪ್ರತಿಧ್ವನಿ ತೋರಬಾರದು. ಹೃದಯದೊಳಗೆ ವೇಗಗತಿಯಿಂದ ಇಲ್ಲವೆ ಅಡ್ಡಾದಿಡ್ಡಿಯಾಗಿ ಪ್ರವಹಿಸುತ್ತಿರುವ ರಕ್ತಪ್ರವಾಹವನ್ನು ಡೋಪ್ಲರ್ ಪ್ರತಿಧ್ವನಿ ಹೃದಯ ಚಿತ್ರಣದಿಂದ ಅಳೆಯಬಹುದು. ಚಲಿಸುತ್ತಿರುವ ಕೆಂಪು ರಕ್ತಕಣವನ್ನು ಶ್ರವಣಾತೀತ ತರಂಗವು ತಾಕಿದಾಗ ಅದರ ಆವರ್ತನದಲ್ಲಿ ಬದಲಾವಣೆಯುಂಟಾಗುತ್ತದೆ. ಅದನ್ನು ಅಳೆದು ವಿಶ್ಲೇಶಿಸಬಹುದು. ಚಲಿಸುವ ಭಾಗಗಳ ಮೇಲೆ ಧ್ವನಿಗ್ರಾಹಕ ಹಾಯ್ದು ಹೋದಾಗರೂಪುಗೊಳ್ಳುವ ಪ್ರಥಮ ಚಲನೆಯ ವೇಗಗತಿಯಂತೆಯೇ ಬದಲಾಗಬಲ್ಲುದು. ಅದನ್ನು ಚಲನಚಿತ್ರದಂತೆ ನೋಡಬಹುದು. ಎಡಹೃತ್ಕುಕ್ಷಿ ಹೊರತಳ್ಳುವ ರಕ್ತ ಪ್ರಮಾಣವನ್ನು ಅಳೆದು ಅದರ ಕಾರ್ಯ ಸಾಮಥ್ರ್ಯವನ್ನು ನಿರ್ಧರಿಸಬಹುದು.	

 (ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ